Saturday, August 6, 2011


ಪತ್ರಿಕೋದ್ಯಮದಿಂದ ಪತ್ರಿಕಾರಂಗಕ್ಕೆ ಪಯಣ ಸಾಧ್ಯವೇ..........
     ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ಪತ್ರಿಕೆಗಳೂ ಸಹ ಸ್ಪಧರ್ೆಗಿಳಿದಿವೆ . ಆ ಸ್ಪಧರ್ೆ ಆರೋಗ್ಯಕರವಾಗಿದ್ದರೆ ಯಾರಿಗೂ ತೊಂದರೆಯಿಲ್ಲ ಆದರೆ ದಿನಕ್ಕೊಂದರರಂತೆ ತಲೆಯೆತ್ತುತ್ತಿರುವ ಹೊಸ ಹೊಸ ಪತ್ರಿಕೆಗಳಿಗೆ  ದೃಶ್ಯಮಾಧ್ಯಮದಲ್ಲಿರುವ ಪೈಪೋಟಿ ಅಂಟಿಕೊಂಡಿದೆ. ಕೆಲವು ಹಿರಿಯ ಪತ್ರಕರ್ತರು ಈ ರೀತಿಯ ಅನಾರೋಗ್ಯಕರ ಸ್ಪಧರ್ೆಯ ಹುಟ್ಟಿಗೆ ಕಾರಣವಾಗಿ ಈಗ ಯುವಪತ್ರಕರ್ತರಿಗೆ ಈ ನೀತಿಯನ್ನು ವಿರೋಧಿಸಿ ಎಂದು ಭಾಷಣಬಿಗಿಯುತ್ತಾರೆ. ಕೆಲವರಂತೂ ನಾವೂ ಈ ರೀತಿಯ ಪೈಪೋಟಿಗೆ ಮುಗಿಬಿದ್ದು ಬೋರವೆಲ್ನಲ್ಲಿ ಬಿದ್ದ ಮಗು, ಐಶ್ವರ್ಯ ರೈ ಕಿರುಬೆರಳಿನ ಗಾಯ, ಮುಂತಾದ ಸಿಂಪಲ್ ವಿಷಯಗಳನ್ನು ನಮ್ಮ ಪತ್ರಿಕೆಗಳಲ್ಲಿ ನಾವೇ ಉತ್ಪ್ರೇಕ್ಷೆ ಮಾಡಿ ಪ್ರಕಟಿಸಿದ್ದೇವೆ ಎಂದು ಮ(ಮಾ)ನಬಿಚ್ಚಿ ಹೇಳುತ್ತಾರೆ. ಅವರೇ ಮಾಧ್ಯಮದ  ನೀತಿಯನ್ನು ಗಾಳಿಗೆತೂರಿ ರಾರಾಜಿಸುತ್ತಿದ್ದಾರೆ ಎಂದರೆ ಅತಿಶಯೋಕ್ತಿಯಾಗದು.
    ಸ್ವತಂತ್ರಾ ಪೂರ್ವ ಪತ್ರಿಕಾರಂಗದಲ್ಲಿ ಪತ್ರಿಕೆಗಳು ಎಷ್ಟರ ಮಟ್ಟಿಗೆ ಪತ್ರಿಕೆಗಳು ಬ್ರಿಟೀಷರ ಎದೆಯನ್ನು ನಡುಗಿಸಿತ್ತೆನ್ನುವುದಕ್ಕೆ "ಕೇಸರಿ" ಎಂಬ ಪತ್ರಿಕೆಯ ಉದಾಹರಣೆಯೇ ಸಾಕು. ಬರು ಬರುತ್ತಾ ಪತ್ರಿಕಾರಂಗ ಎನ್ನುವುದು ಈ "ನೂತನ ಪ್ರಯೋಗ" ಎಂಬ ಪೆಡಂಭೂತದ ಕೈಯಲ್ಲಿ ಸಿಲುಕಿ ಪತ್ರಿಕೆ ಎಂಬ ಉದ್ಯಮಕ್ಕೆ ನಾಂದಿಯಾಯಿತು. ಪತ್ರಿಕೆ , ದೃಶ್ಯಮಾಧ್ಯಮಗಳ ಪೈಪೋಟಿ ಭಾರತದಲ್ಲಿ ಈಗ ಎಷ್ಟರ ಮಟ್ಟಿಗೆ ಹೆಚ್ಚಿದೆಯೆಂದರೆ ಗಂಡ-ಹೆಂಡಿರ ಜಗಳವನ್ನು ನೇರಪ್ರಸಾರ ಮಾಡುವ ಹೀನಾಯ ಸ್ಥಿತಿಯೇರಿದೆ, ಇನ್ನೂ ಏರುತ್ತಾ ಇದೆ. ಅಲ್ಲಿಗೆ ಶುರುವಾಯಿತು ನೋಡಿ ನಿಜವಾದ ಪತ್ರಿಕಾಉದ್ಯಮ. ಮೊದಲ ಹೆಜ್ಜೆ ಪತ್ರಿಕೆಯ ಬೆಲೆ, ದೃಶ್ಯಮಾಧ್ಯಮದ ಟಿ.ಆರ್.ಪಿ.  ಬೆಲೆಯನ್ನು ಏರಿಳಿಸುತ್ತಾ,  ಟಿ.ಆರ್.ಪಿ.ಯ ಹೆಚ್ಚಳದ ಬಗ್ಗೇ ಚಿಂತಿಸಿತ್ತಾ, ಸುದ್ದಿಯನ್ನು ಉತ್ಪ್ರೇಕ್ಷಿಸುತ್ತಾ ಮಾಧ್ಯಮಗಳು ತಮ್ಮ ನೀತಿಯನ್ನು ತಾವೇ ನಿರ್ಲಕ್ಷಿಸಿದವು. ಮುಖ್ಯವಾಗಿ ಜಾಹೀರಾತುಗಳ ಅಬ್ಬರ. ಪತ್ರಿಕೆಗಳ ಜೀವಾಳ ಜಾಹೀರಾತುಗಳು ನಿಜ ಆದರೆ ಪತ್ರಿಕೆಯ ನಿಯಮದಂತೆ 60:40 ( ಸುದ್ದಿ:ಜಾಹೀರಾತು)ಆದರೆ  ಇಂದು ಸಂಪೂರ್ಣ ವಿರುದ್ದವಾಗಿ ಪ್ರಕಟಿತವಾಗುತ್ತಿದೆ. ಇದರಿಂದ ಪತ್ರಿಕೆಗಳಿಗೆ ಲಾಭವೇ ಸರಿ, ಲಾಭವಿದ್ದಲ್ಲಿ ಹಣ, ಹಣವಿದ್ದಲ್ಲಿ ಭ್ರಷ್ಟಚಾರ, ಭ್ರಷ್ಟಚಾರವಿದ್ದಲ್ಲಿ ಕೆಲವು ರಾಜಕಾರಣಿಗಳು. ಎಲ್ಲಿ ನೋಡಿದರೂ ಇಂಟರ್ಲಿಂಕ್ ,  ಮತ್ತೆಲ್ಲಿಗೆ ಪತಿಕಾರಂಗಕ್ಕೆ ಮರುಪ್ರಯಾಣ. 
    ಈ ರೀತಿಯ ಚಕ್ರವ್ಯೂಹದಲ್ಲಿ ಹೇಗೆೆ ತಾನೇ ಯುವ ಪತ್ರಕರ್ತರು ಪತ್ರಿಕೋದ್ಯಮವನ್ನು ಪತ್ರಿಕಾರಂಗಕ್ಕೆ ಪರಿವತರ್ಿಸಲು ಸಾಧ್ಯ. ಈ ಯುವ ಪತ್ರಕರ್ತರೂ ಮುಂದೊಂದು ದಿನ ಹಿರಿಯರಾಗಿ ಮುಂದಿನ ಪತ್ರಕರ್ತರಿಗೆ ಹೇಳುವ ಆಶಯವೇ , "ಮುಂದಿನ ಯುವ ಪತ್ರಕರ್ತರು ಈ ಪತ್ರಿಕೋದ್ಯಮಕ್ಕೆ ಇತಿಶ್ರೀ ಹಾಡಿ" ಎಂದು. 



No comments:

Post a Comment