ಕುಂಟುತ್ತಿದೆ ಹಳ್ಳಿ ಕೃಷಿ
ಚಿವ್ವಾಂ ಚಿವ್ವಾಂ ಎಂದು ಕೂಗುತಿತ್ತು ಯಾವುದೋ ಹಕ್ಕಿ, ಕಾ ಕಾ ಎಂದು ಕಾಗಕ್ಕ ಮಕ್ಕಳನ್ನು ಕರೆಯುತ್ತಿದ್ದಳು, ಜೀರುಂಡೆಗಳು ಝ್ಯಯೆಂದು ತಿರುಗಾಡುತ್ತಿದ್ದವು, ಗುಂಪಾಗಿ ನತರ್ಿಸುತ್ತಿದ್ದವು ನವಿಲುಗಳು, ಎಲ್ಲಾ ಪ್ರಕೃತಿಯ ಚಟುವಟಿಕೆಗಳಿಗೆ ವೇದಿಕೆಯಗಿ ಆಸರೆಯಾದವಳು ಕೃಷಿ ಎನ್ನುವ ದೇವತೆ. ಈ ವಾಕ್ಯ ಯಾವುದೇ ವ್ಯಕ್ತಿಯನ್ನು ಹಳ್ಳಿ ಎಂಬ ಸ್ವರ್ಗದ ಚಿತ್ರಣವನ್ನು ನೇಯುವತ್ತ ಕೊಂಡೊಯ್ಯುತ್ತದೆ. ಸುತ್ತಲೂ ತೆಂಗಿನ ಮರವು ಬೇಲಿಯಂತೆ ಗೋಚರಿಸಿದರೆ ಅದರೊಳಗೆ ಅಡಿಕೆ, ಅದಕ್ಕೆ ಬಳುಕಿ ಸುತ್ತಿರುವ ಒಳ್ಳೆ ಮೆಣಸಿನ ಗಿಡ, ಸಣ್ಣ ಮಟ್ಟಿನ ತರಕಾರಿಯ ತೋಟ ಮುಂತಾದುವುಗಳು ವಾಷರ್ಿಕ ಬೆಳೆಯಾಗಿ ಬೆಳೆದರೆ, ಭತ್ತ, ಜೋಳ, ರಾಗಿ ಮುಂತಾದವು ಮುಖ್ಯ ಬೆಳೆಗಳು. ಇದಕ್ಕೆಲ್ಲಾ ಕತೃವಾಗಿ ರೈತ ಎಂಬ ಮಾನವ ಎದ್ದು ಕಾಣುತ್ತಾನೆ.
ಕಾಲ ಬದಲಾಗಿದೆ, ಮಾನವನೂ ಬದಲಾಗಿದ್ದಾನೆ, ಮೇಲೆ ಹೇಳಿದ ಮಾತೆಲ್ಲಾ ಕಥೆಯಂತೆ ಕಾಣುವುದಕ್ಕೆ ಬಹಳ ಸಮಯ ಬೇಡವೇ ಬೇಡ. ಮುಂದಿನ ಜನಾಂಗದಲ್ಲಿ ಅಕ್ಕಿ ಎಲ್ಲಿ ಬೆಳೆಯುತ್ತದೆ ಎಂದರೆ ರೇಶನ್ ಅಂಗಡಿಯಲ್ಲಿ ಎಂದು ಹೇಳುವ ಉತ್ತರ ಸಿಗಬಹುದೇನೋ.?. ಹೌದು ಯುವ ಜನತೆಯಲ್ಲಿ ಕೃಷಿಯ ಬಗೆಯ ಆಸಕ್ತಿ ಅಳಿಸುತ್ತಿದೆ. ಕೇವಲ ಇವರನ್ನು ದೂಷಿಸಿದರೆ ಪ್ರಯೋಜನವಿಲ್ಲ. ಹಳ್ಳಿಯಲ್ಲಿರುವ ರೈತನೂ ಕೃಷಿಯ ಬಗ್ಗೆ ತನ್ನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಕಾರಣ ಹಲವಾರಿರಬಹುದು..ಆದರೆ ಪಾರಂಪರಿಕವಾಗಿ ಬಂದ ಕೃಷಿಯನ್ನು ತಕ್ಕ ಮಟ್ಟಿಗಾದರೂ ಮುಂದಿನ ಪೀಳಿಗೆಗೆ ವಗರ್ಾವಣೆ ಮಾಡುವ ಸಣ್ಣ ಪ್ರಯತ್ನವನ್ನಾದರೂ ಆತ ಮಾಡಬೇಕು. ಮಾನವನೂ ತನ್ನ ಸ್ವಂತ ಲಾಭಕ್ಕೋಸ್ಕರ ಎಸ್.ಇ.ಜೆಡ್ ಮುಂತಾದವುಗಳನ್ನು ಮುಂದಿಟ್ಟುಕೊಂಡು ರೈತನಿಗೆ ಹಣದ ಆಮಿಷ ಒಡ್ಡಿ ಭೂಮಿತಾಯಿಯನ್ನು ಬಗೆಯುವ ಕಾರ್ಯವನ್ನೂ ನಿರ್ಭಯವಾಗಿ ಮಾಡುತ್ತಿದ್ದಾನೆ. ಯಾವುದೋ ಕಷ್ಟಗಳಿಂದ ಬಳಲುತ್ತಿರುವ ರೈತ ಇದರ ಬಲಿಪಶುವಾಗುತ್ತಿದ್ದಾನೆ. ಕೆಲಸಕ್ಕೆ ಜನರಿಲ್ಲದೆ ಹಲವು ಗದ್ದೆಗಳು ಇಂದಿಗೂ ಬರಡಾಗಿ ಬಳಲುತ್ತಿದೆ. ಯಾಂತ್ರಿಕ ಉಪಕರಣಗಳು ಇವರ ಜಾಗವನ್ನು ಅತಿಕ್ರಮಿಸುತ್ತದೆ. ಯಾವುದೋ ಊರಿನಿಂದ ಕೆಲಸಕ್ಕೆ ಜನರನ್ನು ಕರೆದುಕೊಂಡು ಹೋಗುವ ಪರಿಸ್ಥಿತಿ ಬಂದೊದಗಿದೆ.

ಕಂಬಳ ಎನ್ನುವ ಗ್ರಾಮೀಣ ಕ್ರೀಡೆಯಿಂದ ಸದ್ಯಕ್ಕೆ ಕೋಣಗಳು ತಮ್ಮ ಇರುವಿಕೆಯನ್ನು ತೋರಿಸುತ್ತಿದೆ ಬಿಟ್ಟರೆ ಅವುಗಳನ್ನು ಉಳುವ ಕೆಲಸಕ್ಕೆ ತೊಡಗಿಸಿಕೊಳ್ಳವುದು ಕಡಿಮೆ. ಯಂತ್ರಗಳು ತಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ ಮತ್ತು ಸಮಯದ ಉಳಿತಾಯವೂ ನಮಗಾಗುತ್ತವೆ ಎನ್ನುತ್ತಾರೆ ಕೃಷಿಕರು. ಆದರೆ ಗದ್ದೆ ಉಳುವ ಕಾಲ ಬಂತು ಎಂದರೆೆ ಮನೆಯಲ್ಲಿರುವ ಮಕ್ಕಳಲ್ಲಿ ಆಗುವ ಸಂತೋಷಕ್ಕೆ ಬೇರೆ ಹೋಲಿಕೆಯಿಲ್ಲ. ಕೋಣಗಳನ್ನು ಗದ್ದೆ ತುಂಬಾ ಓಡಿಸಿಕೊಂಡು, ಸಮತ್ತಟ್ಟು ಗೊಳಿಸುವ ಹಲಗೆಯ ಮೇಲೆ ಕುಳಿತುಕೊಂಡು ಕೋಣವನ್ನು ಓಡಿಸುವ ಪರಿಯೇ ಅದ್ಬುತ. ಈಗಿನ ಯುವಜನತೆಗೆ ಇದನ್ನೆಲ್ಲಾ ಕಥೆಯ ರೀತಿ ಹೇಳಬೇಕೆ ಹೊರತು ಕಣ್ಣಾರೆ ನೋಡಿ ಆನಂದಿಸುವಷ್ಟು ಪುಣ್ಯವನ್ನು ಹೊಂದಿರಲಿಕ್ಕಿಲ್ಲ.
ಕೃಷಿಗೆ ಗಣಿಗಾರಿಕೆ ಒಂದೆಡೆ ಪೆಟ್ಟು ನೀಡಿದರೆ, ಜಲವೆಂಬ ಸಂಪತ್ತು ಇನ್ನೊಂದೆಡೆ ಕಾಡುತ್ತಿದೆ. ಸರಿಯಾದ ರೀತಿಯ ಜಲ ಸಂಪನ್ಮೂಲದ ಕೊರತೆ, ಮಳೆ ನೀರನ್ನು ಹೇಗೆ ಉಳಿಸಬಹುದು ಎಂಬುವುದರ ಮೇಲಿನ ಮಾಹಿತಿಯ ಕೊರತೆ, ಮುಂತಾದ ಅಡೆತಡೆಗಳು ಹಳ್ಳಿ ಕೃಷಿಯನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಆದರೆ ಕೆಲವೆಡೆ ಕೃಷಿ ತನ್ನಿರುವಿಕೆಯನ್ನು ಸ್ಪಷ್ಟವಾಗಿ ತೋರಿಸಿಕೊಳ್ಳತ್ತಿದೆ. ಕೆಲವೆಡೆ ಮೈಕೊಡವಿ ಮತ್ತೆ ಮೇಲೇಳುತ್ತಿದೆ.