Monday, April 30, 2012



                         ಕುಂಟುತ್ತಿದೆ ಹಳ್ಳಿ ಕೃಷಿ
ಚಿವ್ವಾಂ ಚಿವ್ವಾಂ ಎಂದು ಕೂಗುತಿತ್ತು ಯಾವುದೋ ಹಕ್ಕಿ, ಕಾ ಕಾ ಎಂದು ಕಾಗಕ್ಕ ಮಕ್ಕಳನ್ನು ಕರೆಯುತ್ತಿದ್ದಳು, ಜೀರುಂಡೆಗಳು ಝ್ಯಯೆಂದು ತಿರುಗಾಡುತ್ತಿದ್ದವು, ಗುಂಪಾಗಿ ನತರ್ಿಸುತ್ತಿದ್ದವು ನವಿಲುಗಳು, ಎಲ್ಲಾ ಪ್ರಕೃತಿಯ ಚಟುವಟಿಕೆಗಳಿಗೆ ವೇದಿಕೆಯಗಿ ಆಸರೆಯಾದವಳು ಕೃಷಿ ಎನ್ನುವ ದೇವತೆ. ಈ ವಾಕ್ಯ ಯಾವುದೇ ವ್ಯಕ್ತಿಯನ್ನು ಹಳ್ಳಿ ಎಂಬ ಸ್ವರ್ಗದ ಚಿತ್ರಣವನ್ನು ನೇಯುವತ್ತ ಕೊಂಡೊಯ್ಯುತ್ತದೆ. ಸುತ್ತಲೂ ತೆಂಗಿನ ಮರವು ಬೇಲಿಯಂತೆ ಗೋಚರಿಸಿದರೆ ಅದರೊಳಗೆ ಅಡಿಕೆ, ಅದಕ್ಕೆ ಬಳುಕಿ ಸುತ್ತಿರುವ ಒಳ್ಳೆ ಮೆಣಸಿನ ಗಿಡ, ಸಣ್ಣ ಮಟ್ಟಿನ ತರಕಾರಿಯ ತೋಟ ಮುಂತಾದುವುಗಳು ವಾಷರ್ಿಕ ಬೆಳೆಯಾಗಿ ಬೆಳೆದರೆ, ಭತ್ತ, ಜೋಳ, ರಾಗಿ ಮುಂತಾದವು ಮುಖ್ಯ ಬೆಳೆಗಳು. ಇದಕ್ಕೆಲ್ಲಾ ಕತೃವಾಗಿ ರೈತ ಎಂಬ ಮಾನವ ಎದ್ದು ಕಾಣುತ್ತಾನೆ.
ಕಾಲ ಬದಲಾಗಿದೆ, ಮಾನವನೂ ಬದಲಾಗಿದ್ದಾನೆ, ಮೇಲೆ ಹೇಳಿದ ಮಾತೆಲ್ಲಾ ಕಥೆಯಂತೆ ಕಾಣುವುದಕ್ಕೆ ಬಹಳ ಸಮಯ ಬೇಡವೇ ಬೇಡ. ಮುಂದಿನ ಜನಾಂಗದಲ್ಲಿ ಅಕ್ಕಿ ಎಲ್ಲಿ ಬೆಳೆಯುತ್ತದೆ ಎಂದರೆ ರೇಶನ್ ಅಂಗಡಿಯಲ್ಲಿ ಎಂದು ಹೇಳುವ ಉತ್ತರ ಸಿಗಬಹುದೇನೋ.?. ಹೌದು ಯುವ ಜನತೆಯಲ್ಲಿ ಕೃಷಿಯ ಬಗೆಯ ಆಸಕ್ತಿ ಅಳಿಸುತ್ತಿದೆ. ಕೇವಲ ಇವರನ್ನು ದೂಷಿಸಿದರೆ ಪ್ರಯೋಜನವಿಲ್ಲ. ಹಳ್ಳಿಯಲ್ಲಿರುವ ರೈತನೂ ಕೃಷಿಯ ಬಗ್ಗೆ ತನ್ನ ಆಸಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನೆ. ಕಾರಣ ಹಲವಾರಿರಬಹುದು..ಆದರೆ ಪಾರಂಪರಿಕವಾಗಿ ಬಂದ ಕೃಷಿಯನ್ನು ತಕ್ಕ ಮಟ್ಟಿಗಾದರೂ ಮುಂದಿನ ಪೀಳಿಗೆಗೆ ವಗರ್ಾವಣೆ ಮಾಡುವ ಸಣ್ಣ ಪ್ರಯತ್ನವನ್ನಾದರೂ ಆತ ಮಾಡಬೇಕು. ಮಾನವನೂ ತನ್ನ ಸ್ವಂತ ಲಾಭಕ್ಕೋಸ್ಕರ ಎಸ್.ಇ.ಜೆಡ್ ಮುಂತಾದವುಗಳನ್ನು ಮುಂದಿಟ್ಟುಕೊಂಡು ರೈತನಿಗೆ ಹಣದ ಆಮಿಷ ಒಡ್ಡಿ ಭೂಮಿತಾಯಿಯನ್ನು ಬಗೆಯುವ ಕಾರ್ಯವನ್ನೂ ನಿರ್ಭಯವಾಗಿ ಮಾಡುತ್ತಿದ್ದಾನೆ. ಯಾವುದೋ ಕಷ್ಟಗಳಿಂದ ಬಳಲುತ್ತಿರುವ ರೈತ ಇದರ ಬಲಿಪಶುವಾಗುತ್ತಿದ್ದಾನೆ. ಕೆಲಸಕ್ಕೆ ಜನರಿಲ್ಲದೆ ಹಲವು ಗದ್ದೆಗಳು ಇಂದಿಗೂ ಬರಡಾಗಿ ಬಳಲುತ್ತಿದೆ. ಯಾಂತ್ರಿಕ ಉಪಕರಣಗಳು ಇವರ ಜಾಗವನ್ನು ಅತಿಕ್ರಮಿಸುತ್ತದೆ. ಯಾವುದೋ ಊರಿನಿಂದ ಕೆಲಸಕ್ಕೆ ಜನರನ್ನು ಕರೆದುಕೊಂಡು ಹೋಗುವ ಪರಿಸ್ಥಿತಿ ಬಂದೊದಗಿದೆ.
ಕಂಬಳ ಎನ್ನುವ ಗ್ರಾಮೀಣ ಕ್ರೀಡೆಯಿಂದ ಸದ್ಯಕ್ಕೆ ಕೋಣಗಳು ತಮ್ಮ ಇರುವಿಕೆಯನ್ನು ತೋರಿಸುತ್ತಿದೆ ಬಿಟ್ಟರೆ ಅವುಗಳನ್ನು ಉಳುವ ಕೆಲಸಕ್ಕೆ ತೊಡಗಿಸಿಕೊಳ್ಳವುದು ಕಡಿಮೆ. ಯಂತ್ರಗಳು ತಮ್ಮ ಕೆಲಸವನ್ನು ಸುಲಭಗೊಳಿಸುತ್ತವೆ ಮತ್ತು ಸಮಯದ ಉಳಿತಾಯವೂ ನಮಗಾಗುತ್ತವೆ ಎನ್ನುತ್ತಾರೆ ಕೃಷಿಕರು. ಆದರೆ ಗದ್ದೆ ಉಳುವ ಕಾಲ ಬಂತು ಎಂದರೆೆ ಮನೆಯಲ್ಲಿರುವ ಮಕ್ಕಳಲ್ಲಿ ಆಗುವ ಸಂತೋಷಕ್ಕೆ ಬೇರೆ ಹೋಲಿಕೆಯಿಲ್ಲ. ಕೋಣಗಳನ್ನು ಗದ್ದೆ ತುಂಬಾ ಓಡಿಸಿಕೊಂಡು, ಸಮತ್ತಟ್ಟು ಗೊಳಿಸುವ ಹಲಗೆಯ ಮೇಲೆ ಕುಳಿತುಕೊಂಡು ಕೋಣವನ್ನು ಓಡಿಸುವ ಪರಿಯೇ ಅದ್ಬುತ. ಈಗಿನ ಯುವಜನತೆಗೆ ಇದನ್ನೆಲ್ಲಾ ಕಥೆಯ ರೀತಿ ಹೇಳಬೇಕೆ ಹೊರತು ಕಣ್ಣಾರೆ ನೋಡಿ ಆನಂದಿಸುವಷ್ಟು ಪುಣ್ಯವನ್ನು ಹೊಂದಿರಲಿಕ್ಕಿಲ್ಲ.
ಕೃಷಿಗೆ ಗಣಿಗಾರಿಕೆ ಒಂದೆಡೆ ಪೆಟ್ಟು ನೀಡಿದರೆ, ಜಲವೆಂಬ ಸಂಪತ್ತು ಇನ್ನೊಂದೆಡೆ ಕಾಡುತ್ತಿದೆ. ಸರಿಯಾದ ರೀತಿಯ ಜಲ ಸಂಪನ್ಮೂಲದ ಕೊರತೆ, ಮಳೆ ನೀರನ್ನು ಹೇಗೆ ಉಳಿಸಬಹುದು ಎಂಬುವುದರ ಮೇಲಿನ ಮಾಹಿತಿಯ ಕೊರತೆ, ಮುಂತಾದ ಅಡೆತಡೆಗಳು ಹಳ್ಳಿ ಕೃಷಿಯನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಆದರೆ ಕೆಲವೆಡೆ ಕೃಷಿ ತನ್ನಿರುವಿಕೆಯನ್ನು ಸ್ಪಷ್ಟವಾಗಿ ತೋರಿಸಿಕೊಳ್ಳತ್ತಿದೆ. ಕೆಲವೆಡೆ ಮೈಕೊಡವಿ ಮತ್ತೆ ಮೇಲೇಳುತ್ತಿದೆ.




    ಹನುಮಾನ್ ಗುಂಡಿ ...ಒಮ್ಮೆ ಮಿಂದು ಬನ್ನಿ........
   ಮಳೆ ಬಿದ್ದು ಮಣ್ಣು ಇನ್ನೂ ಒಣಗದ ಕಾಲದಲ್ಲಿ ಹನುಮಾನ್ ಗುಂಡಿ ಮನಸನ್ನು ಹೊಕ್ಕಿತ್ತು. ಹೆಂಗಾದರೂ ಸರಿ ಹೊರಟು ಗುಂಡಿ ನೋಡಿಬರಬೇಕು ಎಂಬ ಆಸೆ ಮೋಳಕೆಯೊಡೆಯಿತು. ಬೇಕಾದ ಸಮಾಗ್ರಿಗಳೆಲ್ಲಾ ತಯಾರಾದವು. ಕ್ಯಾಮರಾಕ್ಕೆ ಮೊದಲ ಪ್ರಾಶಸ್ತ್ಯ, ಮತ್ತೆ ಹೊಟ್ಟೆಗೆ ಗಿಟ್ಟೆಗೆ. ಮರುದಿನ ಕುದುರೆಮುಖ ದಾರಿಯಲ್ಲಿ ನನ್ನ ಬೈಕು ಎಂಬತ್ತರಲ್ಲಿ ಓಡುತಿತ್ತು. ಜೋತೆಗೊಂದಿಬ್ಬರು ಗೆಳೆಯರೂ ಅವರವರ ಬೈಕಿನಲ್ಲಿ ನನ್ನ್ ಆಸೆಯ ದಾರಿಯಲ್ಲಿ ಸಾಗತೊಡಗಿದ್ದರು. ಮೊದಲ ನಿಲುಗಡೆ ಕುದುರೆಮುಖ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ನಲ್ಲಿ. ಅಲ್ಲಿ ಬೈಕಿನ ನಂಬರ್ ತಮ್ಮ ಉಚಿತ ಪಾಸ್ನಲ್ಲಿ ಬರೆದ ಅಧಿಕಾರಿಯೊಬ್ಬರು ಖುಷಿಗೊಂದಿಷ್ಟು ಎಂದರು... ಸರಿ ಬರುವಾಗ ಪಾಸ್ ಹಿಂತಿರುಗಿಸುತ್ತೇನೆ ಎಂದೆ. ಅವರು ಸುಮ್ಮನೆ ನಕ್ಕರು. ಹಾವಿನ ದಾರಿಯಲ್ಲಿ ಕುದುರೆಮುಖ ಅರಣ್ಯದ ಮಳೆಗಾಳದ  ಸೌಂದರ್ಯವನ್ನು ಅನುಭವಿಸುವುದೇ ಸ್ವರ್ಗ. ಓಪನ್ ಎ.ಸಿ. ಯಲ್ಲಿ ಕುಂತಂತ್ತಿತ್ತು ಆ ಪ್ರಯಾಣ. ನಿಧಾನವಾಗಿ ಚಲಿಸಿ , ಹಾರ್ನ ಹಾಕಬೇಡಿ, ಪ್ಲ್ಯಾಸ್ಟಿಕ್ ಎಸೆಯಬೇಡಿ, ಕಾಡು ಪ್ರಾಣಿಗಳಿಗೆ ತೊಂದರೆ ನೀಡಬೇಡಿ ಎಂಬ ಸೂಚನೆಗಳು ದಾರಿಯುದ್ದಕ್ಕೂ ಕಾಣಿಸಿಕೊಂಡವು. ಕಾಡಿನ ಒಳಗೆ ಕಿವಿಗಚ್ಚುವಷ್ಟು ಜೀರುಂಡೆಯ ದನಿ. ಅಲ್ಲಿಗೆ ತಲುಪಿತ್ತು ಎಸ್. ಕೆ ಬಾರ್ಡರ್, ಅಲ್ಲಿಂದ ಎಡಕ್ಕೆ ಶೃಂಗೇರಿ ಮುಂದೆ ಹೊಸನಾಡು ಎಂದು ಸೂಚನೆಯಿತ್ತು. ದಾರಿ ಗೋತ್ತಿದ್ದ ಕಾರಣ ಹೊಸನಾಡು ದಾರಿ ಹಿಡಿದೆವು.  ಎಸ್. ಕೆ ಬಾರ್ಡರ್ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಹೆದ್ದಾರಿ ಪಕ್ಕದಲ್ಲೇ ಗುಂಡಿಗೆ ದಾರಿಯಿದೆಯೆಂದು ನೆಟ್ನಿಂದ ತಿಳಿದುಕೊಂಡಿದ್ದೆವು.
              ಪ್ರಯಾಣ ಆ 5 ಕಿ. ಮೀ ಯನ್ನೇ ಕಾಯುತ್ತಿತ್ತು. ಸುಮಾರು 7 ಗಂಟೆಗೆ ಮನೆಯಿಂದ ಹೊರಟ ಪ್ರಯಾಣ  ಹನುಮಾನ್ ಗುಂಡಿ ತಲುಪುವಾಗ 11 ಗಂಟೆ. ಬೈಕನ್ನು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದೆವು. ಆಗಲೇ ಹಲವರ ಆಗಮನ ಆ ಸ್ಥಳಕ್ಕೆ ಬಂದಿತ್ತು. 20 ರುಪಾಯಿಯ ಪ್ರವೇಶ ಪತ್ರವನ್ನು ಪಡೆದು ಕಬ್ಬಿಣದ ಮೆಟ್ಟಲುಗಳನ್ನು ಇಳಿಯತೊಡಗಿದೆವು. ಸುಮಾರು 80 ಡಿಗ್ರಿಯ ಇಳಿಜಾರದು. ಜಲಪಾತದ ನೀರಿನ ದನಿ ಆಗಲೇ ಕಿವಿಗೆ ಬೀಳುತಿತ್ತು. ಜಲಪಾತದ ಹತ್ತಿರಕ್ಕೇ ದಾರಿ ಸಾಗಿತು. ಗಾಳಿಯ ತುಂಬೆಲ್ಲಾ ಹನಿ ನೀರಿನ ತಂಪು. ಜಲಪಾತ ಕಂಡೊಡನೆ ಗೆಳೆಯರಿಬ್ಬರಿಗೂ ಸ್ನಾನದ ನೆನಪಾಯಿತು. ಇಬ್ಬರೂ ನೀರಗಿಳಿದರು, ಕೋನೆಯದಾಗಿ ನಾನೂ ಸೇರಿಕೊಂಡೆ. ಫ್ರಿಜ್ ನೀರಿಲ್ಲಿ ಸ್ನಾನ ಮಾಡಿದವನುಭವವದು. ಮೈಕೈಯೆಲ್ಲಾ ಕೆಲವು ಕ್ಷಣಗಳ ಕಾಲ ಇದೆಯೋ ಇಲ್ಲವೋ ಎನ್ನುವ ಪರಿಸ್ಥಿತಿಯನ್ನು ಹೊಂದಿದ್ದವು. ಆದರೂ ಆಸೆ ಸಾಕಾರಗೊಂಡ ಕ್ಷಣವದು.

                       ಮೊದಲ ಪತ್ರ ಗೀಚಿದೆ
 ಅಂದು ಸೀತಾರಾಮ ವಾನಳ್ಳಿ ಮಾಸ್ಟ್ರು ಪತ್ರ ಬರೆಯುವುವುದು ಹೇಗೆ ಎಂದು ಕಲಿಸಿ ಎರಡು ಮೂರು ದಿನವಾಗಿರಬೇಕು. ನನಗೆ ವರ್ಷ ಸುಮಾರು 9. ಬೇಸಿಗೆ ರಜೆ ಶುರುವಾಗಿತ್ತು. ಮನೆಯ ಜಗಲಿಯಲ್ಲಿ ಆರಾಮಾಗಿ ಆಕಾಶ ನೋಡುತ್ತಾ ಕುಳಿತಿದ್ದೆ. ಆತುರದಿಂದ ಕೆಲಸದಾಕೆ ಶಾಂತಿ ಓಡಿಬಂದಳು. ನನ್ನ ಹೆಸರು ಕೂಗಿ ,ಅಣ್ಣಾ ನನ್ನ ಸೊಸೆ ಓಡಿ ಹೋಗಿದ್ದಾಳೆ, ವಾಪಾಸು ಕರೆಯಲು ಒಂದು ಪತ್ರ ಬರಿ ಎಂದಳು. ಆಹಾ ಸಂತೋಷ ಪತ್ರ ಬರೆಯಲು ನನಗೂ ಬರುತ್ತದೆ ಎಂದು ತೋರಿಸಲು ಆತುರದಿಂದ ಕಾಗದ ಮತ್ತು ಪೆನ್ನು ತಂದೆ. ಏನು ಬರಿಬೇಕು ಎಂದು ಕೇಳಿದೆ?
   ಆಕೆಯ ಕತೆ ಶುರುವಾಯಿತು ನೋಡಿ. " ಲೇ ನಾ ಸುಮ್ನೆ ನಿನ್ನ ಬೈದೆ. ನೀ ಅದಕ್ಕೆ ಮನೇ ಬಿಟ್ಟ್ ಹೋಗೋದಾ. ನಂಗೆ ಇನ್ನೂ ನೆಂಪಿದೆ. ನನ್ನ್ ಮಗನಿಗೆ ಒಳ್ಳೆ ಹೆಂಡ್ತಿ, ನಂಗೊಂದು ಸುಂದರಿ ಸೊಸೆ ಬೇಕು ಅಂತ ವಾಚ್ಗದ್ದೆ ಜೋಯಿಸರಲ್ಲಿ ಕೇಳಿದಾಗ ನಮ್ಮೂರಲ್ಲೆ ಒಬ್ಬಳು ಸುಂದರಿ ಇದ್ದಾಳೆ ಮಾತಾಡೋಣ ಎಂದರು. ತುಂಬಾ ಖುಷಿ ಪಟ್ಟೆ ನಾನು. ಮನೆಗೆ ಹಿಂತಿರುಗಿ ನಮ್ಮವರಿಗೂ ತಿಳಿಸಿದೆ, ಅಲ್ಲಿಗೆ ಕಳಿಸಿದೆ. ನಾನಂತೂ ಕಾತುರದಿಂದ ನನ್ ಸೊಸೆ ಹೆಂಗಿರ್ತಾಳೆ ಅಂತ ಕನಸು ಕಾಣ್ತ್ತಿದ್ದೆ. ಎಷ್ಟು ಉದ್ದ, ಬೆಳ್ಳಗಿದ್ಯಾ, ಕಪ್ಪಗಿದ್ಯಾ, ಅಡುಗೆ ಚೆನ್ನಾಗಿ ಮಾಡ್ತಾಳಾ ಮುಂತಾದ ಯೋಚನೇಲಿ ಮಾತುಕತೆ ದಿನ ಬಂತು. ಕವಳ ಹಾಕೊಂಡು ಮಾತುಕತೆ ನಡೆಯಿತು. ಅಂದು ನಿನ್ನ ಉಡುಬಿ ಅಥರ್ಾತ್ ನನ್ನ ಮಗನ ನೋಡಿ ನಾಚಿದ್ದು ನೆನಪಿದ್ಯಾ?.  ನಿಶ್ಚಯವಾಯಿತು ಮದುವೆ. ಗಡಿಬಿಡಿಯಲ್ಲಿ ನಡೆಯಿತು ನಿಶ್ಚಿತಾರ್ಥ. ಆಗ ನನಗಾದ ಖುಷಿ ಹೇಳತೀರದು.ಮದುವೆ ಅದ್ದೂರಿಯಲ್ಲಿ ಮಾಡಿದೆವು. ಮನಗೆ ಹೊಸ ಸೊಸೆ, ಹೊಸ್ತಿಲಲ್ಲೊಂದು ಅಕ್ಕಿ ಸೇರು, ದೇವರ ಕೋಣೆಯಲ್ಲೆರಡು ಕೈಯಚ್ಚು,, ಮನೆಯ ತುಂಬಾ ಗೆಜ್ಜೆ ಸದ್ದು . ಮದುವೆ ನಡೆದು ಮೂರು ದಿನದಲ್ಲಿ ನಾವು ಕೊಲ್ಲೂರು ದೇವಸ್ತಾನಕ್ಕೆ ಹೋಗಿದ್ದು, ಗಮಯನ ಗುಡ್ಡಕ್ಕೆ ಚಾರಣ ಹೋಗಿದ್ದು, ಜೋಗದ ನೀರಲ್ಲಿ ಆಟವಾಡಿದ್ದು ನೆನಪಿಲ್ವೇ?. ದಾರಿ ಅಡ್ಡ ಕಟ್ಟಿ , ಗಂಡನ ಹೆಸರು ನಿನ್ನಲ್ಲಿ ಹೇಳಿಸಿ ಮನೆಗೆ ಬರಮಾಡಿಕೊಂಡ್ವಿ. ತುಂಬಾ ಚೆನ್ನಾಗಿ ಅಡುಗೆ ಮಾಡ್ದೆ. ನಂಗೂ ನಿಮ್ಮಾವಂಗೂ ಸಂತೋಷ ಆಯ್ತು. ಆ ದಿನ ನಾ ನಿಂಗೆ ಸುಮ್ನೆ ಬೇಗ ಅಡುಗೆ ಮಾಡು ಕೆಲ್ಸದವ್ರು ಇದ್ದಾರೆ ಎಂದು ಬೈದೆ. ಅಷ್ಟಕ್ಕೇ ನೀ ಮನೆ ಬಿಟ್ಟೇ ಹೋಗೋದ. ನಂಗೆ ತುಂಬಾ ಬೇಜಾರ್ ಆಯ್ತು ಗೊತ್ತಾ?. ನಿಮ್ಮಾವ ನಂಗೆ  ಬೈದ್ರು. ಆಪುಟ್ಟ ಸೊಸೆನ ಯಾಕ್ ಹಂಗೆ ಬೈದಿ ಅಂತ ನನ್ನ ಗದರಿಸಿದ್ರು. ..ತಪ್ಪಾಯ್ತೆ ಮನೆಗೆ ಬೇಗ ಬಾರೆ."
   ಇದನ್ನ ಬೇಗ ಕಳಿಸಿ ಎಂದಳು ಶಾಂತಿ. ಅಂದವಾಗಿ ಬರೆದಿದ್ದೆ ಪತ್ರವನ್ನ. ಅಕ್ಷರ ತಪ್ಪೇನಾದ್ರು ಇದ್ಯಾ ಅಂತ ನೋಡಿದೆ. ಇಲ್ಲ ಅಂತ ತಿಳಿದ ಮೇಲೆ ಶಾಂತಿ ಹತ್ರ ಸೊಸೆ ವಿಳಾಸ ಕೇಳಿದೆ. " ನಂಗೇನು ಗೊತ್ತು ಸ್ವಾಮಿ , ಮನೆ ಬಿಟ್ಟು ಹೋಗಿದ್ದು ಆಕೆ. ಬೇಗ ಪೋಸ್ಟ್ ಡಬ್ಬಿಗೆ ಹಾಕಿ ಎಂದು ಕನಿಕರದಲ್ಲಿ ಕೇಳಿದಳು ಶಾಂತಿ. ನೋಡಿ ನನ್ ಪರಿಸ್ಥಿತಿ ಅಡ್ರೆಸ್ ಇಲ್ಲದೆ ನನ್ನ ಜೀವನದ ಮೊದಲ ಪತ್ರವನ್ನು ಗೀಚಿದ್ದೆ.